ಸವರ್ಣ ದೀರ್ಘ ಸಂಧಿ- ಇದು ವೀರೇಂದ್ರ ಶೆಟ್ಟಿ ಬರೆದು ನಿರ್ದೇಶಿಸಿದ 2019 ರ ಕನ್ನಡ ಭಾಷೆಯ ಆಕ್ಷನ್ ಹಾಸ್ಯ-ನಾಟಕವಾಗಿದೆ. 'ಸವರ್ಣ ದೀರ್ಘ ಸಂಧಿ' ಎಂಬ ಶೀರ್ಷಿಕೆಯು ಕನ್ನಡ ವ್ಯಾಕರಣದಲ್ಲಿ ಒಂದು ಪದವಾಗಿದೆ. ವೀರೇಂದ್ರ ಶೆಟ್ಟಿ ಮತ್ತು ನಟಿ ಕೃಷ್ಣ ಈ ಚಿತ್ರದಲ್ಲಿ ನಟಿಸಿದ್ದಾರೆ. ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಲುಶಿಗ್ಟನ್ ಥಾಮಸ್, ಹೇಮಂತ್ ಕುಮಾರ್, ಮನೋಮೂರ್ತಿ, ವೀರೇಂದ್ರ ಶೆಟ್ಟಿ ನಿರ್ಮಿಸಿದ್ದಾರೆ. == ಪಾತ್ರವರ್ಗ == ವೀರೇಂದ್ರ ಶೆಟ್ಟಿ ಕೃಷ್ಣಾ ಸುರೇಂದ್ರ ಬಂಟ್ವಾಳ್ ಪದ್ಮಜಾ ರಾವ್ ರವಿ ಭಟ್ ಕೃಷ್ಣ ನಾಡಿಗ್ ರವಿ ಮಂಡ್ಯ ಅಜಿತ್ ಹನುಮಕ್ಕನವರ್ ನಿರಂಜನ ದೇಶಪಾಂಡೆ ಮಧು ಭಾರದ್ವಾಜ್ == ಕಥಾವಸ್ತು == ಈ ಗ್ಯಾಂಗ್‌ಸ್ಟರ್ ಕಾಮಿಡಿಯು ಒಬ್ಬ ಮುದ್ದಣ್ಣನ ಸುತ್ತ ಸುತ್ತುತ್ತದೆ - ಅವನು ಒಬ್ಬ ಅಶಿಕ್ಷಿತ ದರೋಡೆಕೋರ, ಅವನಿಗೆ ವ್ಯಾಕರಣದ ಬಗ್ಗೆ ಅತಿಯಾದ ಒಲವಿದೆ. ಅವನು ಮತ್ತು ಅವನ ಗ್ಯಾಂಗ್ ಸಮಾಜಕ್ಕೆ ಸಹಾಯ ಮಾಡಲು ಅಪರಾಧಗಳನ್ನು ಮಾಡುತ್ತಾರೆ, ಆದರೆ ಅದೇ ಸಮಯದಲ್ಲಿ ಪೊಲೀಸರನ್ನು ಜಾಣತನದಲ್ಲಿ ಮೀರಿಸಿ ಎಂದಿಗೂ ಸಿಕ್ಕಿಬೀಳುವುದಿಲ್ಲ. ಆದರೆ ಒಂದು ದಿನ ಮುದ್ದಣ್ಣನಿಗೆ ಅಮೃತವರ್ಷಿಣಿ ಎಂಬ ಸುಂದರ ಗಾಯಕಿಯ ಮೇಲೆ ಒಲವಾಗುತ್ತದೆ. ಚಲನಚಿತ್ರವು ಅತ್ಯಂತ ವಿನೋದ, ಹಾಸ್ಯ, ಅನಿರೀಕ್ಷಿತ ತಿರುವುಗಳು ಮತ್ತು ಸಂಗೀತ ನಾಟಕದಿಂದ ಕೂಡಿದೆ. ಇದು ತನ್ನ ವೀಕ್ಷಕರನ್ನು ನಕ್ಕು ನಗಿಸುವ ಎಲ್ಲಾ ಅಂಶಗಳನ್ನು ಹೊಂದಿದೆ. == ನಿರ್ಮಾಣ == ಚಿತ್ರವು "ರೌಡಿಸಂ ಕಾಮಿಡಿ" ಪ್ರಕಾರವಾಗಿದೆ. ಆನೇಕಲ್ಲು, ಮೂಡಿಗೆರೆ, ತುಮಕೂರು, ದೇವರಾಯನದುರ್ಗ, ಜಿಗಣಿ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಶಂಕರ್ ಮಹದೇವನ್, ಶ್ರೇಯಾ ಘೋಷಾಲ್ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ. ಮಲಯಾಳಂನ ' ಉಸ್ತಾದ್ ಹೋಟೆಲ್ ' ಖ್ಯಾತಿಯ ಲೋಗನಾಥನ್ ಶ್ರೀನಿವಾಸನ್ ಛಾಯಾಗ್ರಹಣ ಮಾಡಿದ್ದಾರೆ. == ಹಿನ್ನೆಲೆಸಂಗೀತ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸವರ್ಣ ದೀರ್ಘ ಸಂಧಿ @ ಐ ಎಮ್ ಡಿ ಬಿ ಸಂಸ್ಕೃತ ವ್ಯಾಕರಣದಲ್ಲಿ ಸವರ್ಣ ದೀರ್ಘ ಸಂಧಿಗೆ